ಡಾ.ವಿ.ಮುನಿವೆಂಕಟಪ್ಪ ಕನ್ನಡದ ಕವಿ, ವಿಮರ್ಶಕ, ಪ್ರಬುದ್ಧ ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ, ಹೋರಾಟಗಾರ - ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಡಾ.ವಿ.ಮುನಿವೆಂಕಟಪ್ಪನವರಿಗೆ ಬರವಣಿಗೆ ಬಂಡೇಳುವ ಪ್ರಮುಖ ಅಸ್ತ್ರವಾಯಿತು. == ಜನನ/ಜೀವನ == ಇವರು ಕೋಲಾರ ತಾಲ್ಲೋಕಿನ ಯಡಹಳ್ಳಿಯಲ್ಲಿ ೧೯೪೯ ಏಪ್ರಿಲ್ ೧೦ ರಂದು ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ವಿಜ್ಞಾನ ಪದವೀಧರರು. ಕಷ್ಟಪಟ್ಟು ಕೃಷಿ ವಿಷಯದಲ್ಲಿ ಎಂ.ಎಸ್ಸಿ ಪದವಿ ಗಳಿಸಿ, ಅನಂತರ ಗಂಭೀರ ಅಧ್ಯಯನ ನಡೆಸಿ ಕೃಷಿ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದರು. ಬಿ.ಇ.ಡಿ ಸರ್ಕಾರಿ ಅಧಿಕಾರಿಯಾಗಿದ್ದರು. ೧೯೬೮ರಲ್ಲಿ ಡಿ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು. == ನಿರ್ವಹಿಸಿದ ಕರ್ತವ್ಯಗಳು == ಕರ್ನಾಟಕ ದಲಿತ ಲೇಖಕ-ಕಲಾವಿದರ ಬಳಗದ ಸಂಚಾಲಕರಾಗಿ ಕರ್ನಾಟಕ ವಿಚಾರವಾದಿ ಒಕ್ಕೂಟದ ಅಧ್ಯಕ್ಷರಾಗಿ ಮೈಸೂರಿನ ಚೇತನ ಟ್ರಸ್ಟ್ ನ ಅಧ್ಯಕ್ಷರಾಗಿ ದಲಿತ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು ಬಂಡಾಯ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು ಕರ್ನಾಟಕ ದಲಿತ ಚಳುವಳಿಯ ಸ್ಥಾಪಕ ಸದಸ್ಯರು == ಸಾಹಿತ್ಯ ಸೇವೆ ==